ಕಿಡಿಗೇಡಿಗಳ ಕೃತ್ಯ: ಜೀವನಕ್ಕೆ ಆಧಾರವಾಗಿದ್ದ ಜಾನುವಾರು ಸಾವು

 
ಕಿಡಿಗೇಡಿಗಳ ಕೃತ್ಯ: ಜೀವನಕ್ಕೆ ಆಧಾರವಾಗಿದ್ದ ಜಾನುವಾರು ಸಾವು

ಚಾಮರಾಜನಗರ: ಯೂರಿಯಾ ಮಿಶ್ರಿತ ನೀರು ಕುಡಿಸಿ ಜಾನುವಾರಗಳನ್ನು ಕೊಂದಿದ್ದಾರೆ ಎನ್ನಲಾದ ಘಟನೆ ಹನೂರು ತಾಲೂಕಿನ ಕೌದಳ್ಳಿ ಗ್ರಾಮದಲ್ಲಿ ಜರುಗಿದೆ.

ಗ್ರಾಮದ ಗೋವಿಂದ್ ಎನ್ನುವವರಿಗೆ ಸೇರಿದ್ದ ಎರಡು ಎತ್ತು ಹಾಗೂ ಒಂದು ಹಸು ಮೇಯಲು ತೆರಳಿದ್ದ ವೇಳೆ ಜಮೀನೊಂದರಲ್ಲಿ ಸತ್ತು ಬಿದ್ದಿದ್ದವು. ಬಾಯಲ್ಲಿ ನೊರೆ, ವಾಸನೆ ಗಮನಿಸಿದಾಗ ಕಿಡಿಗೇಡಿಗಳು ಯೂರಿಯಾ ಮಿಶ್ರಿತ ನೀರು ಕುಡಿಸಿ ಕೊಂದಿದ್ದಾರೆ ಎಂದು ಮಾಲೀಕ ಗೋವಿಂದ ಆರೋಪಿಸಿದ್ದಾರೆ.

ಜೀವನಕ್ಕೆ ಆಧಾರವಾಗಿದ್ದ ಎತ್ತು, ಹಸುಗಳು ಸತ್ತಿರುವುದರಿಂದ ಕಂಗಾಲಗಿರುವ ಮಾಲೀಕನಿಗೆ ಕೂಡಲೇ ಪರಿಹಾರ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಘಟನೆ ಸಂಬಂಧ ಯಾವುದೇ ದೂರು, ಪ್ರಕರಣ ದಾಖಲಾಗಿಲ್ಲ.

From Around the web