ಚಲಿಸುತ್ತಿದ್ದ ಲಾರಿಯಲ್ಲಿ ಕಾಣಿಸಿಕೊಂಡ ಬೆಂಕಿ

 
ಚಲಿಸುತ್ತಿದ್ದ ಲಾರಿಯಲ್ಲಿ ಕಾಣಿಸಿಕೊಂಡ ಬೆಂಕಿ

ಕೋಲಾರ: ಕಾಟನ್ ಬಾಕ್ಸ್ ತುಂಬಿಕೊಂಡು‌ ಹೋಗುತ್ತಿದ್ದ ಲಾರಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಲಾರಿಯಲ್ಲಿದ್ದ ಕಾಟನ್ ಬಾಕ್ಸ್ ಗಳು ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಕೋಲಾರದಲ್ಲಿ ಜರುಗಿದೆ.

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಆಲಂಬಾಡಿ ಗ್ರಾಮದ ಬಳಿ ಈ ಘಟನೆ ಜರುಗಿದೆ. ಅದೃಷ್ಟವಶಾತ್ ಯಾವುದೆ ಪ್ರಾಣಹಾನಿ ಜರುಗಿಲ್ಲ. ಮಾಲೂರಿನ ಆಲಂಬಾಡಿ ಬಳಿ ಕಾಟನ್ ಬಾಕ್ಸ್ ಗಳನ್ನ ತುಂಬಿಕೊಂಡು ಹೋಗುತ್ತಿದ್ದ ಲಾರಿಯಲ್ಲಿ,  ಆಕಸ್ಮಿಕವಾಗಿ ಬೆಂಕಿ‌ಕಾಣಿಸಿಕೊಂಡಿದೆ. ಕ್ಷಣಮಾತ್ರದಲ್ಲಿ ಬೆಂಕಿ ಇಡೀ ಲಾರಿಗೆ ಆವರಿಸಿದ್ದು, ಚಲಿಸುತ್ತಿದ್ದ ವೇಳೆಯಲ್ಲಿ ಕಾಟನ್ ಬಾಕ್ಸ್ ಗಳು ಸುಟ್ಟು ಭಸ್ಮವಾಗಿದ್ದವು.

ಆದರೂ ಚಾಲಕನ ಗಮನಕ್ಕೆ ಬಾರದೆ ಲಾರಿ ಹೋಡಿಸಿತ್ತಿದ್ದದ್ದನ್ನ ಗಮನಿಸಿದ ಸ್ಥಳೀಯರು, ಚಾಲಕನಿಗೆ ಬೆಂಕಿ ಹಬ್ಬಿಕೊಂಡಿರುವುದು ತಿಳಿಸಿ, ಲಾರಿಯನ್ನ ಗ್ರಾಮದ ಪಕ್ಕದಲ್ಲಿಯೇ ಇದ್ದ, ಮೈದಾನವೊಂದರಲ್ಲಿ ನಿಲ್ಲಿಸಿದರು. ನಂತರ ಸ್ಥಳೀಯರ ಸಹಾಯದ ಮೇರೆಗೆ ಲಾರಿಯಲ್ಲಿ ಹೊತ್ತಿ ಉರಿಯುತ್ತಿದ್ದ ಕಾಟನ್ ಬಾಕ್ಸ್ ಗಳನ್ನ,‌ಲಾರಿಯಿಂದ ಕೆಳಗಿಸಿದರು.

ಇನ್ನು ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಅದೃಷ್ಟವಶಾತ್ ಲಾರಿಯಲ್ಲಿದ್ದವರಿಗೆ ಯಾವುದೇ ಪ್ರಾಣಾಪಾಯ ಆಗಿಲ್ಲವಾದರೂ, ಸ್ಥಳೀಯರಿಂದಾಗಿ ಚಾಲಕ,‌ ಕ್ಲೀನರ್ ಸೇರಿದಂತೆ ಲಾರಿಯಲ್ಲಿದ್ದವರು ಬೆಂಕಿ ಅವಘಡದಿಂದ ತಪ್ಪಿಸಿಕೊಂಡಿದ್ದಾರೆ.

From Around the web