ಅಸ್ವಸ್ಥಗೊಂಡಸ್ಥಿತಿಯಲ್ಲಿ ಮೂರು ಹುಲಿ ಮರಿಗಳು ಪತ್ತೆ: ಮೃತಪಟ್ಡ ಎರಡು ಮರಿಗಳು

 
ಅಸ್ವಸ್ಥಗೊಂಡಸ್ಥಿತಿಯಲ್ಲಿ ಮೂರು ಹುಲಿ ಮರಿಗಳು ಪತ್ತೆ: ಮೃತಪಟ್ಡ ಎರಡು ಮರಿಗಳು

ಚಾಮರಾಜನಗರಅಸ್ವಸ್ಥಗೊಂಡ ಸ್ಥಿತಿಯಲ್ಲಿ ಪತ್ತೆಯಾದ ಮೂರು ಮರಿ ಹುಲಿಗಳನ್ನು ರಕ್ಷಿಸುವಲ್ಲಿ ಎರಡು ಮರಿಗಳು ಮೃತಪಟ್ಟಿರುವ ಘಟನೆ ಬಂಡೀಪುರದ ಹೆಡಿಯಾಲದ ನಗು ಅರಣ್ಯ ಪ್ರದೇಶದಲ್ಲಿ ಜರುಗಿದೆ.

ಗಸ್ತಿನಲ್ಲಿದ್ದ ಅರಣ್ಯಾಧಿಕಾರಿಗಳ ಕಣ್ಣಿಗೆ ಬಿದ್ದ ಅಸ್ವಸ್ಥಗೊಂಡಿದ್ದ ಹುಲಿ ಮರಿಗಳನ್ನು ರಕ್ಷಣೆ ಮಾಡುವಷ್ಟರಲ್ಲಿ ಎರಡುಹುಲಿ ಮರಿಗಳು ಮೃತಪಟ್ಟಿದ್ದು, ಒಂದು‌‌ ಗಂಡು ಹುಲಿಮರಿ ಅರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಅದನ್ನು ಮೈಸೂರಿಗೆ ರವಾನೆ ಮಾಡಲಾಗಿದೆ.

ಅನಾಥವಾಗಿ ಸಿಕ್ಕ ಹುಲಿ ಮರಿಗಳ ತಾಯಿ ಹುಲಿಯ ಪತ್ತೆ ಕಾರ್ಯಕ್ಕೆ ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ. ಆಹಾರವಿಲ್ಲದೇ ಹುಲಿ ಮರಿಗಳು ಅಸ್ವಸ್ಥಗೊಂಡಿವೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ.

From Around the web