ಕಿಡ್ನಾಪ್ ಪ್ರಕರಣ ದಾಖಲಾದ ನಾಲ್ಕೇ ಗಂಟೆಯಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ ಪೋಲಿಸರು

 
ಕಿಡ್ನಾಪ್ ಪ್ರಕರಣ ದಾಖಲಾದ ನಾಲ್ಕೇ ಗಂಟೆಯಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ ಪೋಲಿಸರು

ಆನೇಕಲ್: ಕಿಡ್ನಾಪ್ ಪ್ರಕರಣ ದಾಖಲಾದ ಕೇವಲ ನಾಲ್ಕು ಗಂಟೆಗಳಲ್ಲಿಯೇ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಬೆಂಗಳೂರು ಹೊರವಲಯ ಜಿಗಣಿ ಪೋಲಿಸರ ತಂಡ ಯಶಸ್ವಿಯಾಗಿದ್ದಾರೆ. 

ಬಂಧನಕ್ಕೂಳಗಾದ ಆರೋಪಿಗಳನ್ನು ಆನೇಕಲ್ ಪಟ್ಟಣದ ಜಾಹಿದ್ ಹುಸೇನ್, ರೂಪೇಶ್, ಅಮೀನ್, ಸಮೀರ್ ಫಾಷಾ ಸೇರಿದಂತೆ ಮತ್ತಿಬ್ಬರನ್ನು ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಪಹರಕ್ಕೂಳಗಾದ ವ್ಯಕ್ತಿಯನ್ನು ಉತ್ತರ ಪ್ರದೇಶ ಮೂಲದ ವಿಶ್ವಜಿತ್ ಆಗಿದ್ದು, ಈತ ಕೆಲ ವರ್ಷಗಳ ಹಿಂದೆ ಹೊಟ್ಟೆಪಾಡಿಗಾಗಿ ಬದುಕು ಕಟ್ಟಿಕೊಳ್ಳಲು ಜಿಗಣಿ ಸಮೇಪದ ಹಾರಗದ್ದೆಗೆ ಬಂದು ಕಾರ್ಪೆಂಟರ್ 
ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಕಳೆದ ರಾತ್ರಿ 8.30 ರ ಸಮಯದಲ್ಲಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಯುವಕನನ್ನು ಆರು ಜನ ಕಿರಾತಕರ ಗ್ಯಾಂಗ್ ಕಾರಿನಲ್ಲಿ ಅಪಹರಿಸಿ ಕಣ್ಣಿಗೆ ಬಟ್ಟೆ ಕಟ್ಟಿ ರಾತ್ರಿಯಿಡೀ ಸುತ್ತಾಡಿಸಿದ್ದಾರೆ. ಬೆಳಗಿನ ಜಾವ ಅಪಹರಣಕ್ಕೆ ಒಳಗಾದ ವಿಶ್ವಜಿತ್ ಮೊಬೈಲ್ ಮೂಲಕವೇ ಅವರ ಅಣ್ಣನಿಗೆ ಕರೆಮಾಡಿ 5 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಬೆಳಗ್ಗೆ ಹನ್ನೊಂದು ಗಂಟೆಯ ಸುಮಾರಿಗೆ ಯುವಕನ ಸಹೋದರ ಹಲವಾರು ಕಡೆ ತಮ್ಮನನ್ನು ಹುಡುಕಾಟ ನಡೆಸಿ ಕೊನೆಗೆ ಜಿಗಣಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಜಿಗಣಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಬಿ.ಕೆ ಶೇಖರ್ ನೇತೃತ್ವದಲ್ಲಿ ಎರಡು ತಂಡಗಳನ್ನು ನೇಮಕ ಮಾಡಿ ಕಾರ್ಯಾಚರಣೆಗಿಳಿದಿದ್ದರು. ಯುವಕನನ್ನು ಅಪಹರಣ ಮಾಡಿದ ಆರೋಪಿಗಳು ತಮಿಳುನಾಡಿನ ಹೊಸೂರು ಸಮೀಪದ ಜೂಂಕಾ ಬಳಿಯ ನೀಲಗಿರಿ ತೋಪಿನಲ್ಲಿ ಕೂಡಿ ಹಾಕಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೋಲಿಸರು ಆರೋಪಿಗಳನ್ನು ವಶಕ್ಕೆ ಪಡೆದು ವ್ಯಕ್ತಿಯನ್ನು ರಕ್ಷಿಸಿ ಪೋಷಕರಿಗೆ ಒಪ್ಪಿಸಿದ್ದಾರೆ.

From Around the web