ಪೊಲೀಸ್ ಕೆಲಸ ಬಿಟ್ಟವಳೇ ತನ್ನ ವೀಡಿಯೋ, ಫೋಟೋಗಳ ಮೂಲಕ ಸಕತ್ ಫೇಮಸ್ ಆದಳು

ಲಂಡನ್: ಇಲ್ಲೊಬ್ಬಳು ಬೆಡಗಿ ನಗಿದ್ದ ಸರ್ಕಾರಿ ಪೊಲೀಸ್ ಕೆಲಸವನ್ನು ತೊರೆದು ಏನ್ ಮಡಿದ್ದಾಳೆ ಗೊತ್ತಾ..? ಕೇಳಿದ್ರೆ, ಹೀಗೂ ಸಾಧ್ಯಾನ ಅನ್ಕೋತೀರಾ..
ಚಾರ್ಲೆಟ್ ರೋಸ್.. ಇವಳು ಲಂಡನ್ ನ ಮಾಜಿ ಪೊಲೀಸ್ ಅಧಿಕಾರಿ. ಕಷ್ಟಪಟ್ಟು ಸರ್ಕಾರಿ ಕೆಲಸ ಗಿಟ್ಟಿಸಿಕೊಂಡು ನಂತರ ಬೇಡ ಅಂತ ತನಗಿದ್ದ ಪೊಲೀಸ್ ಕೆಲಸವನ್ನು ಬಿಟ್ಟು ಈಗ ಕೋಟಿ ಕೋಟಿ ಆದಾಯ ತನ್ನದಾಗಿಸಿಕೊಂಡಿದ್ದಾಳೆ.
ಪೊಲೀಸ್ ಕೆಲಸ ಸೇರಿದ ಚಾರ್ಲೆಟ್ ರೋಸ್ ಕೆಲವೇ ದಿನಗಳಲ್ಲಿ ಈ ಕೆಲಸ ಮಹಿಳೆಯರಿಗೆ ಸೂಕ್ತವಲ್ಲ ಎಂದು ಅರಿತು. ಕೆಲಸ ಬಿಟ್ಟಿದ್ದಾಳೆ. 2014 ರಲ್ಲಿ ಕೆಲಸ ಬಿಟ್ಟು, 2016 ರಲ್ಲಿ ಸ್ನೇಹಿತರ ಸಲಹೆಯಂತೆ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದಾಳೆ. ಅಲ್ಲಿ ಸಣ್ಣ ಪುಟ್ಟಾ ಅಡ್ವಟೈಸ್ ಗಳಿಗೆ ಮಾಡೆಲಿಂಗ್ ಮಾಡಿಕೊಂಡು ಜೀವನ ನಿರ್ವಹಿಸಿದ್ದಾಳೆ.
ಈ ವೇಳೆ, ಓನ್ಲಿ ಫ್ಯಾನ್ಸ್ ಅನ್ನೋ ಆಪ್ ನಲ್ಲಿ ತನ್ನ ಪ್ರೊಫೈಲ್ ಪೇಜ್ ಓಪನ್ ಮಾಡಿದ್ದಾಳೆ. ಅಲ್ಲಿಗೆ ರೋಸ್ ಲಕ್ ಬದಲಾಗಿ ಹೋಯಿತು. ಇದರಲ್ಲಿ ತನ್ನ ಫೋಟೋಗಳನ್ನು ಅಪ್ ಮಾಡುತ್ತಿದ್ದಂತೆ. ದಿನದಿಂದ ದಿನಕ್ಕೆ ಫಾಲೋವರ್ಸ್ ಗಳ ಸಂಖ್ಯೆ ಗಗನಕ್ಕೇರಿದೆ. ಈಗ ತನ್ನ ಫೋಟೋ, ವೀಡಿಯೋಗಳಿಂದ ಹಣ ಸಂಪಾದಿಸುತ್ತಿದ್ದಾಳೆ.
ಇದೀಗ ರೋಸ್, ತಿಂಗಳೀಗೆ 1.50 ಕೋಟಿ ಆದಾಯವನ್ನು ಈ ಆಪ್ ಮೂಲಕ ಗಳಿಸುತ್ತಿದ್ದಾಳೆ. ಕೆಲವರು ಈ ಆಪ್ ಅನ್ನು ಪೋರ್ನ್ ಆಪ್ ಎನ್ನುತ್ತಾರೆ. ಆದರೆ, ರೋಸ್ ತನ್ನ ಿತಿಮಿತಿಯಲ್ಲಿ ನಾನಿದ್ದೇನೆ ಅನ್ನುತ್ತಾಳೆ. ಒಟ್ನಲ್ಲಿ ಫೋಟೋ, ವೀಡಿಯೋ ಅಪ್ ಲೋಡ್ ಮಾಡುವ ಮೂಲಕ ರೋಸ್, ಫೇಮಸ್ ಆಗುವುದರ ಜೊತೆಗೆ ಹಣವನ್ನೂ ಗಳಿಸುತ್ತಿದ್ದಾಳೆ.