ಮುಟ್ಟಿನ ವೇಳೆ ಮಹಿಳೆಯೊಬ್ಬರಿಗೆ ಕಣ್ಣಿನಲ್ಲಿ ರಕ್ತ ಸ್ರಾವ..

 
ಮುಟ್ಟಿನ ವೇಳೆ ಮಹಿಳೆಯೊಬ್ಬರಿಗೆ ಕಣ್ಣಿನಲ್ಲಿ ರಕ್ತ ಸ್ರಾವ..

ಮುಟ್ಟಿನ ಸಮಯ ಎಂದರೆ, ಎಲ್ಲಾ ಮಹಿಳೆಯರಿಗೂ ಅದೊಂದು ಥರಹ ಕಿರಿ ಕಿರಿಯ ದಿನಗಳು. ಹೊಟ್ಟೆ ನೋವು, ಕಾಲುಗಳ ಸೆಳೆತ, ಸಹಿಸಲಾರದ ನೋವು, ಮಾನಸಿಕ ಒತ್ತಡ ಎಲ್ಲವೂ ಒಮ್ಮೆಲೆ ಬಂದು ಒಕ್ಕರಿಸಿದಂತಾಗುತ್ತದೆ.

ಆದರೆ, ಇಲ್ಲೊಬ್ಬ ಮಹಿಳೆಗೆ ವಿಚಿತ್ರವಾದ ಅನುಭವವಾಗಿದೆ. ಅದು ಏನೆಂದರೆ, ಆಕೆಗೆ ತನ್ನ ಮುಟ್ಟಿನ ಸಮಯದಲ್ಲಿ ಕಣ್ಣಿನಲ್ಲಿ ರಕ್ತ ಸ್ರಾವವಾಗಿದೆ. ಚಂಡೀಘಢದಲ್ಲಿ 25 ವರ್ಷದ ಗೃಹಿಣಿಗೆ ಈ ಸಮಸ್ಯೆ ಎದುರಾಗಿದೆ.

ಈಕೆ ಮುಟ್ಟಾದಾಗ ಕಣ್ಣಿನಲ್ಲಿ ರಕ್ತ ಸ್ರಾವವಾಗಿದೆ. ಹೆದರಿದ ದಂಪತಿ ಕೂಡಲೇ ವೈದ್ಯರನ್ನು ಭೇಟಿಯಾಗಿದ್ದಾರೆ. ಆದರೆ, ಸ್ಕ್ಯಾನಿಂಗ್, ಎಕ್ಸರೆ ಏನೂ ಮಾಡಿದರೂ ಇದಕ್ಕೆ ಕಾರಣ ತಿಳಿದು ಬಂದಿಲ್ಲ. ಕೊನೆಗೆ ಆಕ್ಯುಲರ್ ವಿಕಾರಿಯಸ್ ಮುಟ್ಟಿನ ರೋಗದಿಂದ ಇವರಿಗೆ ಹೀಗೆ ಕಣ್ಣಿನಲ್ಲಿ ರಕ್ತ ಹರಿಯುತ್ತಿದೆ ಎಂದು ಹೇಳಿದ್ದಾರೆ.

ಇದು ಕೆಲವರಿಗೆ ಆಕ್ಯುಲರ್ ವಿಕಾರಿಯಸ್ ಮುಟ್ಟಿನ ರೋಗದಿಂದ ದೇಹದ ಇತರೆ ಭಾಗಗಳಲ್ಲಿ ಮುಟ್ಟಿನ ಸಮಯದಲ್ಲಿ ಹೀಗೆ ಬ್ಲೀಡಿಂಗ್ ಆಗುತ್ತೆ ಎಂದು ವೈದ್ಯರು ಹೇಳಿದ್ದಾರೆ. ಶ್ವಾಸಕೋಶ, ಮೂಗು, ತುಟಿ, ಕಣ್ಣುಗಳಿಂದ ಹೀಗೆ ರಕ್ತ ಸ್ರಾವವಾಗುತ್ತದಂತೆ. ಇದು ಈಸ್ಟ್ರೋಜನ್ ಹಾಗೂ ಪ್ರೊಜೆಸ್ಟ್ರಾನ್ ಮಿಶರಣದಿಂದ ಹೀಗಾಗುತ್ತದಂತೆ.

ಬಳಿಕ ವೈದ್ಯರು ಈಕೆಗೆ ಮಾತ್ರೆಗಳನ್ನು ನೀಡಿದ್ದು, ಔಷಧಿ ಪಡೆದ ಮೂರು ತಿಂಗಳ ನಂತರ ಕಣ್ಣಿನಲ್ಲಿ ರಕ್ತ ಹರಿಯುವಿಕೆ ನಿಂತು ಹೋಗಿದೆಯಂತೆ.

From Around the web