ಬ್ಯಾಂಕ್ ಗಳ ಖಾಸಗೀಕರಣ ವಿರೋಧಿಸಿ ಬ್ಯಾಂಕ್ ಸಿಬ್ಬಂದಿ ಪ್ರತಿಭಟನೆ : ಗ್ರಾಹಕರ ಪರದಾಟ

 
ಬ್ಯಾಂಕ್ ಗಳ ಖಾಸಗೀಕರಣ ವಿರೋಧಿಸಿ ಬ್ಯಾಂಕ್ ಸಿಬ್ಬಂದಿ ಪ್ರತಿಭಟನೆ : ಗ್ರಾಹಕರ ಪರದಾಟ

ಚಾಮರಾಜನಗರ : ರಾಷ್ಟ್ರೀಕೃತ ಬ್ಯಾಂಕ್ ಗಳ ಖಾಸಗೀಕರಣ ವಿರೋಧಿಸಿ ಇಂದು ಬ್ಯಾಂಕ್ ಸಿಬ್ಬಂದಿಗಳು ಬ್ಯಾಂಕ್ ಗಳನ್ನು ಬಂದ್ ಮಾಡಿ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದರು.

ಚಾಮರಾಜನಗರ ಜಿಲ್ಲಾದ್ಯಂತ ಇರುವ ಕೆನರಾ, ಎಸ್ ಬಿಐ, ಇಂಡಿಯನ್ ಸೇರಿದಂತೆ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳು ಬ್ಯಾಂಕ್ ಗಳನ್ನು ಬಂದ್ ಮಾಡಿ ಎರಡು ದಿನಗಳಕಾಲ ಬ್ಯಾಂಕ್ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಬ್ಯಾಂಕ್ ಬಂದ್ ವಿಚಾರ ತಿಳಿಯದ ಕೆಲ ಗ್ರಾಹಕರು ಹಣ ಕಟ್ಟಲು ಮತ್ತು ತೆಗೆದುಕೊಳ್ಳಲು ಬ್ಯಾಂಕ್ ಬಳಿ ಬಂದು ಬಂದ್ ವಿಚಾರ ತಿಳಿದು ಪರದಾಡುತ್ತಿದ್ದಾರೆ. ಒಟ್ಟಾರೆ ಕೇಂದ್ರ ಸರ್ಕಾರದ ಖಾಸಗೀಕರಣ ನೀತೀಯಿಂದಾಗಿ ಬ್ಯಾಂಕ್ ಸಿಬ್ಬಂದಿ ಹಾಗೂ ಗ್ರಾಹಕರು ಪರದಾಡು ವಂತಾಗಿದೆ.

From Around the web