ಬೆಳಗ್ಗೆ ಮದುವೆ ರಾತ್ರಿ ಪೋಲಿಸ್ ಠಾಣೆ ಮೆಟ್ಟಿಲೇರಿದ ಬಿಗ್ ಬಾಸ್ ಸೀಸನ್ 7 ಖ್ಯಾತಿಯ ಚೈತ್ರಾ ಕೊಟ್ಟೂರು

 
ಬೆಳಗ್ಗೆ ಮದುವೆ ರಾತ್ರಿ ಪೋಲಿಸ್ ಠಾಣೆ ಮೆಟ್ಟಿಲೇರಿದ ಬಿಗ್ ಬಾಸ್ ಸೀಸನ್ 7ರ ಖ್ಯಾತಿಯ ಚೈತ್ರಾ ಕೊಟ್ಟೂರು

ಕೋಲಾರ: ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು ನಿನ್ನೆ ಬೆಳ್ಳಿಗ್ಗೆ ಮಾಡಿಕೊಂಡ ಮದುವೆ ಸಂಜೆ ವೇಳೆಗೆ ಪೋಲಿಸ್ ಠಾಣೆ ಮೆಟ್ಟಿಲೇರಿದೆ.

ಬಿಗ್ ಬಾಸ್ ಸೀಸನ್ 7ರಲ್ಲಿ ಸ್ಪರ್ಧೆಯಾಗಿದ್ದ ಚೈತ್ರಾ ಕೊಟ್ಟೂರು ಮಂಡ್ಯ ಮೂಲದ ನಾಗಾರ್ಜುನ್ ಜೊತೆ ನಿನ್ನೆ ಬೆಳಗ್ಗೆ ಬೆಂಗಳೂರಿನ ಬ್ಯಾಟರಾಯನಪುರ ಗಣಪತಿ ದೇಗುಲದಲ್ಲಿ  ಮದುವೆ ಮಾಡಿಕೊಂಡಿದ್ರು. ಆದ್ರೆ ಮದುವೆಗೆ ಇಷ್ಟವಿರಲಿಲ್ಲ ಸಂಘಟನೆಗಳು ಬಲವಂತವಾಗಿ ತಮ್ಮ ಮಗನನ್ನು ಕರೆದೊಯ್ದು ಬೆದರಿಕೆ ಒಡ್ಡಿ ಮದುವೆ ಮಾಡಿಸಲಾಗಿದೆ ಎಂದು ನಾಗಾರ್ಜುನ್ ಕುಟುಂಬದವರು ಕೋಲಾರದ ಕುರುಬರಪೇಟೆಯ   ಚೈತ್ರಾ ಮನೆಗೆ ಬಂದು ತಗಾದೆ ತೆಗೆದು ಗಲಾಟೆ ನಡೆಸಿದ್ದಾರೆ. ಕುರಿತು ಕೋಲಾರದ ಮಹಿಳಾ ಪೋಲಿಸ್ ಠಾಣೆಯಲ್ಲಿ ನಾಗಾರ್ಜುನ್ ಕುಟುಂಬದವರು ದೂರು ದಾಖಲಿಸಿದ್ದಾರೆ.

ಪೋಲಿಸ್ ಠಾಣೆಗೆ ಅಗಮಿಸಿದ ನಾಗಾರ್ಜುನ್, ಚೈತ್ರಾ ಜೊತೆ ಮದುವೆ ಇಷ್ಟವಿರಲಿಲ್ಲ  ಅಂತಾ ಹೇಳಿದ್ರು, ನಾಗಾರ್ಜುನ್ ಗೆ ಚೈತ್ರಾ ಜೊತೆ ಮದುವೆಗೆ ಇಷ್ಟವಿರಲಿಲ್ಲ ಸಂಘಟನೆಗಳ ಜೊತೆಗೂಡಿ ಬಲವಂತವಾಗಿ ನಾಗಾರ್ಜುನ್ ಕೂಡಿ ಹಾಕಿ ದೇಗುಲದಲ್ಲಿ ಮದುವೆ ಮಾಡಿಸಲಾಗಿದೆ. ಸಂಘಟನೆಗಳ ಬೆದರಿಕೆಗೆ ನಾಗಾರ್ಜುನ್ ಬಲವಂತವಾಗಿ ಚೈತ್ರಾಗೆ ತಾಳಿ ಕಟ್ಟಿದ್ದಾನೆ ಎಂದು ನಾಗಾರ್ಜುನ್ ಕುಟುಂಬದವರು ಆರೋಪಿಸಿದ್ರು.

ಇನ್ನೂ ನಾಗಾರ್ಜುನ್ ಇಷ್ಟ ಅವನ ಜೊತೆ ಹೋಗುವೆ ಅಂತಾ ಚೈತ್ರಾ ಕೊಟ್ಟೂರು ಪಟ್ಟು ಹಿಡಿದಿದ್ದಾಳೆ. ಎರಡು ಕುಟುಂಬದ ಕಡೆಯಿಂದ ಮಹಿಳಾ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

From Around the web