ವಿಸ್ಟ್ರಾನ್ ಕಂಪನಿ ಪ್ರಕರಣ ಇಬ್ಬರು ಆರೋಪಿಗಳಿಗೆ ಹೈಕೋರ್ಟ್ ಜಾಮೀನು

 
ವಿಸ್ಟ್ರಾನ್ ಕಂಪನಿ ಪ್ರಕರಣ ಇಬ್ಬರು ಆರೋಪಿಗಳಿಗೆ ಹೈಕೋರ್ಟ್ ಜಾಮೀನು

ಕೋಲಾರ: ಕಳೆದ 2020  ಡಿಸೆಂಬರ್ 12 ರಂದು ವಿಸ್ಟ್ರನ್ ಕಂಪೆನಿಯಲ್ಲಿ ನಡೆದ ದಾಂದಲೇ ಪ್ರಕರಣಕ್ಕೆ ಸಂಬಂದಿಸಿದಂತೆ ಇಬ್ಬರು ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಆರೋಪಿಗಳಾದ ಉದಯ್ ಭಾನುಸಿಂಗ್  ಹೆಚ್ (23) ವಿನೋದ್ ಕುಮಾರ್.ಸಿ (23) ಎಂಬುವರಿಗೆ ಜಸ್ಟಿಸ್ ಕೆ.ನಟರಾಜನ್ ಏಕಪೀಠ ಆರೋಪಿ ವಕೀಲರ ವಾದವನ್ನು ಆಲಿಸಿ  ಜಾಮೀನು ಮಂಜೂರು ಮಾಡಿತು.

11 ಮತ್ತು 12 ಆರೋಪಿಗಳಾಗಿದ್ದು ಇವರೊಂದಿಗೆ 7000 ಮಂದಿ ಆರೋಪಿಗಳಿದ್ದಾರೆ ಎಂದು ಪೋಲಿಸರು ಆರೋಪಿಸಿದ್ದಾರೆ,ಆರೋಪಿಗಳನ್ನು ಬಂಧಿಸುವಾಗ ಅವರ ಬಳಿ 5 ಲ್ಯಾಪ್‌ಟಾಪ್ ಸಿಕ್ಕಿದೆ ಎನ್ನುವ ಕಾರಣಕ್ಕಾಗಿ ಮೇಲ್ನೋಟಕ್ಕೆ ಆರೋಪಿಗಳು ದಾಂದಲೆಯಲ್ಲಿ ಭಾಗಿದ್ದಾರೆ ಎಂದು  ಜಿಲ್ಲಾ ನ್ಯಾಯಾಲಯ ಜಾಮೀನು ನಿರಾಕರಣೆ ಆದೇಶ ಮಾಡಿದೆ. ಇದು ಸರಿಯಲ್ಲ ಜತೆಗೆ ಆರೋಪಿಗಳು ಕಳೆದ ಮೂರು ತಿಂಗಳು ಕಾಲ ನ್ಯಾಯಾಂಗದ ಬಂಧನದಲ್ಲಿದ್ದಾರೆ ಎಂದು ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ವಿಸ್ಟ್ರನ್ ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ್ ಕಂಪನಿಯ ಮೇಲೆ ನೌಕರರು ನಡೆಸಿದ ದಾಂದಲೆಯಿಂದ ಸುಮಾರು 437.70 ಕೋಟಿ ರೂಪಾಯಿಗಳು ಕಂಪನಿಗೆ ನಷ್ಟವಾಗಿದೆ ಎಂದು ಪೋಲಿಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ 143,147, 148, 323,395, 448,435, 427, 504,506,r/w 149 IPC sections ಅಡಿ ಸುಮಾರು 7000 ಮಂದಿಯ ವಿರುದ್ದ ಪ್ರಕರಣ ದಾಖಲಿಸಲಾಗಿತ್ತು.

From Around the web