ಮೂರನೇ ಸಿಡಿ ಬಿಡುಗಡೆ ಮಾಡಿದ ಯುವತಿ: ರಮೇಶ್ ಜಾರಕಿಹೊಳಿ ದೂರು ಕೊಡ್ತಾಳೆ..

 
ಮೂರನೇ ಸಿಡಿ ಬಿಡುಗಡೆ ಮಾಡಿದ ಯುವತಿ: ರಮೇಶ್ ಜಾರಕಿಹೊಳಿ ದೂರು ಕೊಡ್ತಾಳೆ..

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ ದಿನ ದಿನವೂ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ತಿದೆ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್‌ಐಟಿಗೆ ವಹಿಸಿದ್ದು, ಸಿಡಿ ಯುವತಿ ಈಗ ಮೂರನೇ ವೀಡಿಯೋ ಹರಿಬಿಟ್ಟಿದ್ದಾಳೆ.

ನಿನ್ನೆ ಎರಡನೇ ವೀಡಿಯೋ ರಿಲೀಸ್ ಮಾಡಿದ್ದ ಯುವತಿ, ಎಸ್‌ಐಟಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಳು.ವೀಡಿಯೋದಲ್ಲಿ ಯುವತಿ, ‘ನನಗೆ ನನ್ನ ತಂದೆ-ತಾಯಿಯ ಸುರಕ್ಷತೆ ಮುಖ್ಯ‌. ನನ್ನ ತಂದೆತಾಯಿಗೆ ನಾನು ತಪ್ಪೇ‌ ಮಾಡಿಲ್ಲ ಎಂಬುದು ಗೊತ್ತಿದೆ. ನನ್ನ ಅಪ್ಪ ಅಮ್ಮ ಸ್ವ-ಇಚ್ಛೆಯಿಂದ ದೂರು ಕೊಡಲು ಸಾಧ್ಯವೇ ಇಲ್ಲ. ನನ್ನ ತಂದೆ ತಾಯಿ ಸೇಫ್ ಆಗಿದ್ದಾರೆ ಎಂಬುದು ತಿಳಿದ ಮೇಲೆ ನಾನೇ ವಿಚಾರಣೆಗೆ ಬಂದು ಹಾಜರಾಗುತ್ತೇನೆ’ ಎಂದಿದ್ದಳು.

ಆದರೆ, ಇಂದು ಮೂರನೇ ಸಿಡಿ ರಿಲೀಸ್ ಮಾಡಿರುವ ಯುವತಿ, ‘ಕಳೆದ 24 ದಿನಗಳಿಂದ ನಾನು ಜೀವಭಯದಲ್ಲಿದ್ದೆ. ಜೀವ ಬೆದರಿಕೆಯಿಂದ ನಾನು ಕಂಗಾಲಾಗಿದ್ದೆ. ಆದರೆ ಈಗ ಎಲ್ಲಾ ಪಕ್ಷದ ನಾಯಕರು, ಸಂಘಟನೆಗಳು ಮತ್ತು ರಾಜ್ಯದ ಜನ ನನಗೆ ಬೆಂಬಲ ನೀಡುತ್ತಿದ್ದಾರೆ. ಹೀಗಾಗಿ ನನಗೆ ಧೈರ್ಯ ಬಂದಿದೆ. ಧೈರ್ಯ ಬಂದಿರುವದರಿಂದ ರಮೇಶ್ ಜಾರಕಿಹೊಳಿ ವಿರುದ್ಧ ಇಂದು ಮಧ್ಯಾಹ್ನ ದೂರು ನೀಡುತ್ತೇನೆ’ ಎಂದು ವಿಡಿಯೋದಲ್ಲಿ ಹೇಳಿದ್ದಾಳೆ.

From Around the web