ರಾಜ್ಯದಲ್ಲಿ ಹಲವು ಜನ ಮಹಾನಾಯಕರಿದ್ದಾರೆ : ಶಿಕ್ಷಣ ಸಚಿವ ಸುರೇಶ್ ಕುಮಾರ್

 
ರಾಜ್ಯದಲ್ಲಿ ಹಲವು ಜನ ಮಹಾನಾಯಕರಿದ್ದಾರೆ : ಶಿಕ್ಷಣ ಸಚಿವ ಸುರೇಶ್ ಕುಮಾರ್

ಚಾಮರಾಜನಗರ: ರಾಜ್ಯದಲ್ಲಿ ಹಲವಾರು ಜನ ಮಹಾನ್ ನಾಯಕರು ಇದ್ದಾರೆ ಎಲ್ಲರೂ ಸಹ ಮಹಾ ನಾಯಕರೇ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.

ಗುಂಡ್ಲುಪೇಟೆಯಲ್ಲಿ ಮಾಧ್ಯಮಗಳೊಂದಿಗೆ ಸಿಡಿ ಹಿಂದಿರುವ ಮಹಾನ್ ನಾಯಕ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಸಿಡಿ ಲೇಡಿ ಪ್ರತ್ಯಕ್ಷ ಆಗುವವರೆಗೂ ಸತ್ಯ ಹೊರ ಬರುವುದಿಲ್ಲ. ಸಿಡಿ ಲೇಡಿ ಪೊಲೀಸ್ ಕಮಿಷನರ್ ಬಳಿ ಬಂದು ಹೇಳಿಕೆ ನೀಡಿದರೆ ಸತ್ಯ ಹೊರಬರಲಿದೆ ಎಂದು ಹೇಳಿದರು.

ಸಿಡಿ ವಿಚಾರವಾಗಿ ಎಸ್ಐಟಿ ತಂಡ  ಉತ್ತಮವಾಗಿ ತನಿಖೆ ಕಾರ್ಯ ನಿರ್ವಹಿಸುತ್ತಿದೆ. ತನಿಖೆ ಹಂತದ ವಿಚಾರ ಬಗ್ಗೆ ಗೃಹ ಸಚಿವರನ್ನು ಕೇಳಿ ಹೇಳುತ್ತೇನೆ ಎಂದ ಅವರು, ಸದನದಲ್ಲಿ ಖಾಸಗಿ ವಿಚಾರಗಳ ಚರ್ಚೆಗಳಿಂದ ಸಭಾಧ್ಯಕ್ಷರು ಬೇಸರಗೊಂಡಿದ್ದಾರೆ. ಖಾಸಗಿ ವಿಚಾರಗಳ ಬಗ್ಗೆ ಚರ್ಚೆಗೆ ಬೇರೆ ವೇದಿಕೆಗಳು ಇದೆ, ಸದನದಲ್ಲಿ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ಅಗತ್ಯವಾಗಿತ್ತು ಎಂದರು.

From Around the web